ಒತ್ತಡದ ಬೀಸಣಿಗೆ: ಭೂತಳ ಗಣಿಗಳಿಗೆ ಮೇಲಿನಿಂದ ಗಾಳಿಯನ್ನು ತಳ್ಳುವ ಸಲುವಾಗಿ ಉಪಯೋಗಿಸುವ ಸಾಧನ (ಫೋರ್ಸಿಂಗ್ ಫ್ಯಾನ್). ಇದನ್ನು ಇಳಿದುರಿ ಕೂಪಗಳ ಮೇಲಾಗಲಿ ಅಥವಾ ತಳದಲ್ಲಾಗಲಿ ಬೀಸಣಿಗೆಯ ಕೋಣೆಯಲ್ಲಿ ಅಳವಡಿಸಿರುತ್ತಾರೆ. ಭೂತಳ ಗಣಿಗಳಲ್ಲಿ ಗಾಳಿಯ ಚಲನೆ ಸಾಧ್ಯವಾಗಲು ಇಳಿದುರಿ ಕೂಪದಲ್ಲಿ (ಡೌನ್ ಕ್ಯಾಸ್ಟ್‌ ಷಾಫ್ಟ್‌) ಗಾಳಿಯನ್ನು ಒಳಗೆ ತಳ್ಳಬೇಕು. ಒತ್ತಡ ಬೀಸಣಿಗೆ ಯಾವಾಗಲೂ ವಾತಾವರಣದಿಂದ ಗಾಳಿಯನ್ನು ಗಣಿಯೊಳಕ್ಕೆ ತಳ್ಳುವುದರಿಂದ ಅಪಾಯಕಾರಿಯಾದ ಗಣಿ ಅನಿಲಗಳೊಡನಾಗಲಿ ಅಥವಾ ತೇವವಾದ ಗಾಳಿಯೊಡನಾಗಲಿ ಸಂಪರ್ಕವಿರುವುದಿಲ್ಲ. ಆದ್ದರಿಂದ ಇದರ ಜೀವಿತಕಾಲ ಹೆಚ್ಚಾಗಿದೆ.	(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ